Tuesday, 14 February 2017

ನನಗ್ಯಾರೂ ಬೇಕಿಲ್ಲ
ಅನ್ನೋ ಹಾಗೇ ಇಲ್ಲ
ಒಬ್ಬರಿಗೊಬ್ಬರಿಲ್ಲಿ
ಸ್ನೇಹ ಪ್ರೀತಿ ಚೆಲ್ಲಿ.

ಕಟ್ಟುವುದಾ ನೋಡು
ಇರುವೆ ಗೂಡನಲ್ಲಿ
ಹೇಗೆ ಒಂದೊಂದಾಗಿ
ಸಾಗಿವೆ ಸರತಿ ಸಾಲಿನಲ್ಲಿ.

ಕೆಸರ ತಾವರೆ ಅರಳಲು
ರವಿಯು ಮೂಡಬೇಕು
ನೈದಿಲೆ ಕಂಪು ಸೂಸಲು
ಚಂದ್ರನು ನಗಬೇಕು.

ಈ ಜಗದಿ ನಿನ ಇರವು
ಇರಬೇಕು ಹಾಂಗೆ
ಶಿವನ ಜಡೆಯ ಮೇಲೂ
ಹರಿದ ಹಾಗೆ ಗಂಗೆ.

ಸೃಷ್ಟಿಯ ಈ ನಿಯಮ
ಅರಿತು ನಡೆಯಬೇಕು
ಮನುಜ ಸಂಗಜೀವಿ
ಬೆರೆತು ಬಾಳಬೇಕು.